Wednesday, January 18, 2012

ಮೂಲ ಹುಡುಕಿ ಮೂಲದ ಜೊತೆಗೆ ಮೂಲಂಗಿ ಸಾಂಬಾರ್ ಉಚಿತ !

ಬೌ ಬೌ ಎನ್ನುತ್ತಿದ್ದ ನಾಯಿ ಬೊಗಳದೆ ಬಾಯ್ತೆರೆದು ಬಿದ್ದಿತ್ತು .  ನಮ್ಮ ಮನೆಯ ಮುಂದಿನ ವೆನಿಲ್ಲಾ ಬಳ್ಳಿಯೂ ನಾಯಿ ಸತ್ತ ಸಂತೋಷದಲಿ ತನ್ನ ತೂಕವನ್ನು ಮತ್ತೂ ಕಡಿಮೆ ಮಾಡಿಕೊಂಡಿತ್ತು . ಇದನ್ನು ಪ್ರತ್ಯಕ್ಷವಾಗಿ ಕಂಡ ತೆಂಗಿನ ಮರವೂ ಸಾಕ್ಷಿ ಹೇಳಲು ನಿರಾಕರಿಸುತ್ತಿತ್ತು. ಪಾಪ ! ತನ್ನ ತೂಕ ಇಳಿಸಿ ಕೊಳ್ಳುವ ಅಬ್ಬರದಲ್ಲಿ ನಮ್ಮನೆ ವೆನಿಲ್ಲಾ ಬಳ್ಳಿಯು ತನಗೆ ಆಶ್ರಯವಾಗಿದ್ದ ಗೊಬ್ಬರಗುಟ್ಟದ ಬುಡವನ್ನೇ ಬೀಳುವಂತೆ ಮಾಡಿತ್ತು ! ಹಾಗಾದರೆ ಇದಕ್ಕೆಲ್ಲ ಕಾರಣದ ಮೂಲವಾದರೂ ಏನು ?
ಮೂಲ ತಿಳಿಸಿದವರಿಗೆ ಮೂಲಂಗಿ ಸಾಂಬಾರ್ ಉಚಿತವಾಗಿ ವಿತರಿಸಲಾಗುವುದು !